Sunday, August 18, 2013

26

ಅವಕಾಶವಿದ್ದಲ್ಲೆಲ್ಲಾ ಆಕಾಶ ಸುರಿಸಿದ ಮಳೆಗೆ
ತನ್ನೆಲೆಗೂ ಮಿಕ್ಕಿ ಬನ್ನಳಿಗೆಯೆಲೆಯಾವರಿಸಿದ ಮರ,
ತನ್ನತನವಳಿದು ತಾ ತಾನಲ್ಲವೆನಿಸಿದ್ದು ಕಂಡು
ನಿನ್ನ ಗಮನದಡಿಯ ನನ್ನ ಚಿತ್ರ ಕಣ್ತುಂಬಿದ್ದೇಕೆ?!

1 comment:

  1. ಬನ್ನಳಿಗೆಯೆಲೆಯಾವರಿಸಿದ ಮರದ ಅಳಲು ನಮ್ಮದೂನು.

    ReplyDelete