Sunday, August 30, 2015

ನೀ ಬರುವ ಹಾದಿಯಲಿ
ಮಂಕಾಗುತಾ ಆಸೆಯಾಲಾಪ ಮಂದ್ರದಲಿ ನಿಲುವಾಗ
ಕಾರ್ಮೋಡ ಹನಿಯದೆ ಹಾದುಹೋದ ಬೋಳು ಆಗಸ ಮನಸು..
ನೀ ಮರೆತ ಹಾದಿಯಲಿ
ನೆನಪ ಜಾಡಲೇ ಸಾಗುವ ಕಣ್ಣೆದುರು ನೀ ಬಂದು ನಿಂತಾಗ
ಬೆಳೆವ ಎಳೆಬಿಸಿಲ ನಡು ಸೋನೆ ಬರೆದ ಮಳೆಬಿಲ್ಲು ಮನಸು..

2 comments:

  1. ‘ಬೋಳು ಆಗಸ’, ‘ಸೋನೆ ಮಳೆ ಬರೆದ ಮಳೆಬಿಲ್ಲು’ ಇವು ಸುಂದರವಾದ ಪ್ರತೀಕಗಳು. ಆದರೆ ‘ಅದಲ್ಲದ್ದೊಂದು ದಾರಿಯಲಿ’ ಎನ್ನುವ ಪದಪುಂಜವನ್ನು ಓದುವಾಗ, ಸ್ವಲ್ಪ ಎಡವಿದಂತಾಗುತ್ತದೆ.

    ReplyDelete
    Replies
    1. ಹೌದಾ ಸರ್? ಬದಲಾಯಿಸಿದೆ. ಈಗ ನೋಡಿ..

      Delete