Thursday, September 12, 2013

43

ನನ್ನ ರಾಗತಾಳ
ಆ ಪದಗಳಲಿ ಹಾಸುಹೊಕ್ಕಾಗಿ
ಎದೆಯ ದನಿ ಹೊಮ್ಮಿಸಿದ ಹಾಡಿಗೋಗೊಟ್ಟು
ಪರವಶವಾದದ್ದು ನಿಜ.
ದಾಹಮೋಹ
ದೇಹದ ಕಣಕಣದಿ ಹಾಸುಹೊಕ್ಕಾಗಿ
ಬಯಕೆ ಚಿಮ್ಮಿಸಿದ ಹಾಡು ಯಾವುದಾದರೂ
ಕ್ಷಮಿಸು, ಓಗೊಡಲಾರೆ,
ಪ್ರೇಮಿಸಿರುವೆ,
ಪ್ರೇಮಿಸುತಲೇ ಉಳಿಯಬಯಸುವೆ.

1 comment:

  1. ಒಮ್ಮೆ ಒಳಿದದ್ದು ಇನ್ಯಾವಾಗಲೋ ಸಾಕ್ಷಾತ್ಕರಿಸಿತೇ no chance!

    ReplyDelete