Thursday, September 19, 2013

46

ಉಗುಳು, ಉಗುಳು..
ನಾ ಉಗುಳುದಾನಿಯಾದರೂ ಸರಿಯೇ.
ಸ್ವೀಕರಿಸದೆಯೂ ತುಂಬಿಕೊಳಬಲ್ಲೆ,
ತುಳುಕುವಷ್ಟಾದಾಗ ಮೆಲ್ಲ ಹೊರಚೆಲ್ಲಬಲ್ಲೆ
ಕಸದ ಬುಟ್ಟಿಗೆ, ತಿಪ್ಪೆಗುಂಡಿಗೆ.
ನಿನ್ನೊಳಗಿನ ಕಿಡಿ ಹಾಗಾದರೂ ಹೊರಹೋಗಲಿ.
ಅಲ್ಲೇ ಉಳಿದರೆ ಉಸಿರುಸಿರನೇ ಉಂಡು
ಬೆಳೆದು ದಾವಾನಲವಾದೀತು, ಸುಟ್ಟೀತು.
ನೀ ಸುಡದುಳಿವುದು ಮುಖ್ಯ ನನಗೆ,
ನಾ ಪಡೆಯದೆಯೇ ಭರ್ತಿಯಾದರೂ ಸರಿಯೇ
.

2 comments:

  1. ಒಳ್ಳೆಯ ಮಾತು, ನೋವು - ರೋಷ - ಭಾವನೆಗಳನ್ನೂ ಅದುಮಿಡುವ ಬದಲು ಅದನ್ನು ಹೊರಚೆಲ್ಲಿ ಬಿಟ್ಟರೆ ಮನಸೂ ಹಗುರ.

    ReplyDelete